	
ಬ್ರಹ್ಮಪುತ್ರ. ಪಾರಮಾರ್ಥಿಕವಾದ ಅದ್ವೈತ ತತ್ತ್ವಜ್ಞಾನವನ್ನು ಸ್ವಭಾವವಾಗಿಯೇ ಹೊಂದಿದವ. ಇವನಿಗೆ ಪುಲಸ್ತ್ಯ ಕುಮಾರನಾದ ನಿದಾಘನೆಂಬ ಬ್ರಾಹ್ಮಣನೊಬ್ಬ ಶಿಷ್ಯನಾಗಿದ್ದ. ಈ ಶಿಷ್ಯನಿಗೆ ಅದ್ವೈತವನ್ನುಪದೇಶಿಸಲು ಗುರು ಸಾವಿರಾರು ವರ್ಷಗಳು ಕಾದು ಕೇವಲ ಎರಡು ಬಾರಿ ಮಾತ್ರ ಉಪದೇಶ ಮಾಡಿದನೆಂದು ವಿಷ್ಣುಪುರಾಣದಲ್ಲಿ ಹೇಳಿದೆ. ಆರ್ಭಮಸಾಮ ಎಂಬ ಸಾಮದರ್ಶನ ಮಾಡಿದ ಋಷಿಯೊಬ್ಬನಿಗೂ ಇದೇ ಹೆಸರಿತ್ತು. ಋಭುಗಳೆಂದರೆ ದೇವತೆಗಳು; ಅವರಿಗೂ ಮಿಗಿಲಾದ ಉತ್ತಮ ಲೋಕದ ದೇವತೆಗಳು; ಚಾಕ್ಷುಷ ಮನ್ವಂತರದ ದೇವಗಣ; ಯಾಗಾಧಿಕಾರ ಹೊಂದಿದ ತ್ರಿವರ್ಣದವರಿಗಿಂತ ಕೆಳಗಿನವರು-ಎಂಬ ಅರ್ಥಗಳಿವೆ.

(ಎನ್.ಎಸ್.ಆರ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ